![[barney.gonzaga.edu]](http://barney.gonzaga.edu/~aburton/img/dream_eye.jpg)
[barney.gonzaga.edu
ನೆನಪಿನ ನೀರಿನಲಿ ನೆನೆದ,
ನಿನ್ನ ಸವಿ ಮಾತು ನೆನೆದು,
ತುಂಬಿ ಹರಿಸಿತು ಹರೆಯದ ಬಯಕೆ,
ಕಾಣದೆ ನಿನ್ನ ಕಾದು ಕುಂತು ಕೊರಗಿ
ಕೊನೆಗೆ ಕನಸುಗಣ್ಣು ಕವಿಯೆನ್ನಾಗಿಸಿತು.
- ಮಂಜುನಾತ
![[barney.gonzaga.edu]](http://barney.gonzaga.edu/~aburton/img/dream_eye.jpg)
[barney.gonzaga.edu
ನೆನಪಿನ ನೀರಿನಲಿ ನೆನೆದ,
ನಿನ್ನ ಸವಿ ಮಾತು ನೆನೆದು,
ತುಂಬಿ ಹರಿಸಿತು ಹರೆಯದ ಬಯಕೆ,
ಕಾಣದೆ ನಿನ್ನ ಕಾದು ಕುಂತು ಕೊರಗಿ
ಕೊನೆಗೆ ಕನಸುಗಣ್ಣು ಕವಿಯೆನ್ನಾಗಿಸಿತು.
- ಮಂಜುನಾತ
ಶನಿವಾರ, ೧೪ ಮಾರ್ಚ್ ೨೦೦೯ರಂದು ತಿಳಿಗನ್ನಡವನ್ನು ಕೆಂಡಸಂಪಿಗೆಯ ದಿನದ ಬ್ಲಾಗ್ಗಲ್ಲಿ ತಿಳಿಗನ್ನಡವನ್ನು ಜಿತೇಂದ್ರರು ಇಂತು ಹಾರಯ್ಸಿದ್ದಾರೆ.
“ಈಗಷ್ಟೇ ಈ ತಿಳಿಕನ್ನಡಿಗರ ಮೊದಲ ಬರಹ ಕಾಣಿಸಿಕೊಂಡಿದೆ. ಉತ್ಸಾಹಿ ಕನ್ನಡಿಗರು ಹೆಚ್ಚೆಚ್ಚು ಬರೆಯಲಿ, ಬ್ಲಾಗ್ ಬೆಳೆಯಲಿ ಅನ್ನುವುದೇ ನಮ್ಮ ಹಾರೈಕೆ.”
ಮೊದಲು ಅವರಿಗೆ ತುಳಿಲು ಮತ್ತು ನನ್ನಿ.
ನಮ್ಮ ಹಂಬಲ ಬರೀ ನಾವಿಶ್ಟೇ ಮಂದಿ ತಿಳಿಗನ್ನಡದಲ್ಲಿ ಬರೆಯುವುದಲ್ಲ. ಉವರು ಇಲ್ಲಿ ತಮ್ಮ ತಿಳಿಗನ್ನಡದ ಬರಹಗಳನ್ನು ಹೊರತರಬಹುದು. ನಮ್ಮ ಗುರಿ ತಿಳಿಗನ್ನಡವನ್ನು ಉಳಿಸಿ, ಬೆಳೆಸುವುದು. ಇಲ್ಲಿ ಬರುವ ಬರಹಗಳ ಸಂಗತಿಗಳಿಗಿಂತ ಬಳಕೆಯಾಗುವ ಪದ ಮತ್ತು ನುಡಿಬಗೆಯ ಮೇಲೇ ಒತ್ತು.
ತಿಳಿಗನ್ನಡದ ಕಂಪನ್ನು ಕೆಂಡಸಂಪಿಗೆಯೂ ಬೀರಲಿ ಎಂಬುದು ಸಣ್ಣ ಬಯಕೆ ಕೂಡ. ಕೆಂಡಸಂಪಿಗೆಯ ಬರಹಗಳನ್ನು ನಾವೆಲ್ಲ ಮೆಚ್ಚುವೆವು. ಕೆಂಡಸಂಪಿಗೆ ಕನ್ನಡದ ಒಂದು ಮೇರು ಮಿಂದಾವು(Internet site). ಅದರ ಕನ್ನಡದೂಳಿಗಕ್ಕೆ ನಾವು ತಲೆಬಾಗುವೆವು.
ನನ್ನಿ
-ತಿಳಿಗನ್ನಡಿಗರು.