ತುಳಿಲು,
ಕನ್ನಡವೆಂಬ ಹಿರಿನುಡಿಯಲ್ಲೇ ಬೇಕಾದಶ್ಟು ಸಾಕಾಗುವಶ್ಟು ಉಶ್ಟೋ ಪದಗಳು ಇದ್ದರೂ, ಬೇರೆನುಡಿಯ, ಪದಗಳನ್ನು ತುಂಬಿ, ಬರಹಗನ್ನಡವನ್ನು ಅದರ ದಿಟದ ತನದಿಂದ ಸೊಗಡಿನಿಂದ ದೂರಾಗಿಸಿರುವ ಬಗ್ಗೆ ಬೇಸರಗೊಂಡ ನಾವು, ನಮ್ಮ ತಿಳಿವಿನ ಮಟ್ಟದಲ್ಲಿ, ಕನ್ನಡದ್ದೇ ಆದ ಉಲಿಗಳನ್ನು ಬಳಸಿ, ಬರಹಗಳನ್ನು ನೆಗಳಲು ಒಂದು ತಾವನ್ನು ಕಟ್ಟಿಕೊಂಡಿದ್ದೇವೆ. ಕನ್ನಡದಲ್ಲಿ ದೊರೆಯದ ಒರೆಗಳಿಗೆ, ಹೊರನುಡಿಯಿಂದ ಒರೆಗಳನ್ನು ಕನ್ನಡಯಿಸಿ ಬಳಸಿಕೊಳ್ಳವೆವು.
ನಮ್ಮ ಗುರಿ, ಕನ್ನಡದ್ದೇ ಆದ ಒರೆಗಳನ್ನು ಬಳಕೆಯಲ್ಲಿ ಉಳಿಸುವುದು, ಮತ್ತೂ ಬಳಕೆ ತಪ್ಪಿಸಿದ ಒರೆಗಳನ್ನು ಮರುಬಳಕೆಗೆ ತರುವುದೇ ಹೊರತು, ಇದು ಊ ನುಡಿಯ ಬಗ್ಗೆ ಹಗೆದೋರುವ, ಮೇಣ್ ಕೀಳುಗಳೆಯುವ ಮೊಗಸಲ್ಲ.
ತಿಳಿ ಎಂದರೆ ಕನ್ನಡದಲ್ಲಿ ಅಪ್ಪಟ ಎಂಬ ತಿಳಿವೂ ಇದೆ. ಅದಕ್ಕೆ ತಿಳಿಗನ್ನಡ ಎಂದರೆ ಅಪ್ಪಟವಾದ, ಬೆರಕೆಯಲ್ಲದ, ಕನ್ನಡದ್ದೇ ತನದ ಕನ್ನಡ ಎಂಬ ಅರಿತ.
ತಿಳಿಗನ್ನಡದ ಬರಹಗಳನ್ನು ಬರೆದು ಇಲ್ಲಿ ಹೊರತರಲು ಹುರುಪಿರುವವರಿಗೆ, ಊಗಲೂ ನಮ್ಮ ನಲ್ವರುವು.
ತಿಳಿಗನ್ನಡದಲ್ಲಿ ಬರೆಯಲು ಶಂಕರಬಟ್ಟರ ಹೊತ್ತಗೆಗಳು ನೆರವಾಗುವುವು.
ನನ್ನಿ,
ತಿಳಿಗನ್ನಡಿಗರು.
ಈ ದಾರಿಯಲ್ಲಿ ನಿಮ್ಮ ಪ್ರಯತ್ನ ನಿಜವಾಗಿಯೂ ಒಳ್ಳೆಯದು.
ಮುಂದುವರೆಸಿ. ನೀವು ಬರೆಯುತ್ತಾ ಹೋಗಿ…. ನಿಮ್ಮ ತಿಳಿಗನ್ನಡ ದ ಬರಹಗಳಿಗೆ ನನ್ನ ಮೆಚ್ಚುಗೆ / ಓದು ಯಾವಾಗಲು ಇರುತ್ತೆ.
ಶಂಕರ ಬಟ್ಟರ ಹೊತ್ತಗೆಗಳು ತುಂಬಾ ಹಿಂದೆಯೇ ನನ್ನ ಆಸಕ್ತಿ ಕೆರಳಿಸಿದ್ದರೂ ಕಾರಣಾಂತರಗಳಿಂದ ಓದಲಾಗಿಲ್ಲ. ಮುಂದಿನ ವಾರದ ಕೊನೆಯಲ್ಲಿ ಒಂದೆರಡು ಒಂದೆರಡು ತರುತ್ತೇನೆ.
ಮೊನ್ನೆ ಹೀಗೆ.. ಒಂದು ಟೆಕ್ನಿಕಲ್ ವಿಷಯದ ಮೇಲೆ ಕನ್ನಡದಲ್ಲಿ ಬರೆಯಲು ಹೋಗಿ …ಬರವಣಿಗೆ ಮುಂದೆ ಹೋಗದೆ ಬೇರೆ ನುಡಿಯ ಪದಗಳನ್ನು ಬಳಸಿದ ಮೇಲೆ ಮುಗಿಯಿತು. ನನ್ನ ಮೊನ್ನಿನ ಬ್ಲಾಗು ನನಗೆ ಶಂಕರ ಬಟ್ಟರ ಪುಸ್ತಗಳ ಅವಶ್ಯಕತೆಯನ್ನು ಒತ್ತಿ ಹೇಳಿತು.
ನನ್ನೀ.
ಮಾಯ್ಸರೇ,
ತುಂಬಾ ಸಂತೋಷ! ತಿಳಿಗನ್ನಡದ ಬರಹಗಳಿಗೆ ಕಾಯುತ್ತಿರುವೆ…