ಊ ಬದುಕಿರೋ ನುಡಿಯೂ ಅದು ಬದುಕಿರೋದು ಎಂದರೆ ಅದನ್ನು ಮಂದಿ ಇನ್ನೂ ಉಲಿಯುತ್ತಿದ್ದಾರೆ. ಅದರಿಂದ ಒಬ್ಬರಿಗೊಬ್ಬರು ಅರಿಮೆಗಳನ್ನು(information) ಹಂಚಿಕೊಳ್ಳುತ್ತಿದ್ದಾರೆ. ಆ ನುಡಿಯಲ್ಲಿ ಮಾತಾಡುತ್ತಿದ್ದಾರೆ ಎಂದು. ನುಡಿಯ ಉಸಿರೇ ಅದರ ಉಲಿಗಳು, ಸದ್ದುಗಳು. ಒಂದು ನುಡಿಯ ಉಲಿಗಳ ಬಗ್ಗೆಯ ಆರಯ್ಯು(Research) ಮತ್ತು ಅರಿವುಗಳನ್ನು ಉಲಿಯರಿಮೆ(Phonology) ಎನ್ನುವರು.
ಎಲ್ಲ ನುಡಿಗಳಲ್ಲಿರುವ ಎಲ್ಲ ಉಲಿಗಳು ಬೇರೆ ಎಲ್ಲ ನುಡಿಗಳಲ್ಲಿ ಇರುವುದಿಲ್ಲ. ಒಂದು ನುಡಿಯಲ್ಲಿರಿವ ಉಲಿಗಳು ಮತ್ತೊಂದು ನುಡಿಯಲ್ಲಿ ಇರದೇ ಇರಬಹುದು. ಆದುದರಿಂದ ಅವುಗಳನ್ನು ಬೇರೆನುಡಿಗರು ಉಲಿಯಲಾರದೇ ಇರಬಹುದು. ಒಂದು ನುಡಿಯಲ್ಲಿರುವ ಪದಗಳನ್ನು ಅದನ್ನು ಮಾತಾಡದ, ತಮ್ಮ ಬುಡಕಟ್ಟಿನ, ತಾಯಿಮಾತು, ಮನೆಮಾತಲ್ಲದ ಮಂದಿಗೆ ದೊಡ್ಡ ತೊಡಕು. ಈ ತೊಡಕಿನಿಂದಲೇ ಬೇರೆಬೇರೆ ನುಡಿಯ ಮಂದಿ ತಮ್ಮದಲ್ಲದ ನುಡಿಗಳನ್ನು ಹಸನಾಗಿ ನೀಟಾಗಿ ಉಲಿಯಲಾರರು. ಹೀಗೆ ಮತ್ತೊಂದು ನುಡಿಯನ್ನು ಉಲಿಯುವಾಗ ಆಗುವ ಉಲಿತಪ್ಪುಗಳನ್ನು ತೀರಿಸಲು ಆಗೋದೇ ಇಲ್ಲ ಎಂದೇ ಹೇಳಬೇಕು. ಮಾದರಿಯಾಗಿ ಇಂಗ್ಲಿಶ್ ನುಡಿಯುವ ಹೆಚ್ಚು ಇಂಡಿಯಿಗರೆಲ್ಲ ಇಂಗ್ಲಿಶಿನ ಎರಡು ’ವ’, ಉಸಿರುಲಿ(Aspirated), ಪದದ ಕೊನೆಯ ’ಱ್’ ಮುಂತಾದ ತಮ್ಮ ನುಡಿಯಲ್ಲಿ, ಉಲಿಕೆಯಲ್ಲಿ ಇರದ ಉಲಿಯನ್ನು ಸರಿಯಾಗಿ ನುಡಿಯೋದೇ ಇಲ್ಲ. ಹಾಗೇ ಸಂಸ್ಕ್ರುತ, ಪ್ರಾಕ್ರುತದ(ಹಿಂದಿ ಮುಂತಾದವು) ನುಡಿಗರಿಗೆ ದ್ರಾವಿಡನುಡಿಗಳ ಉಲಿಗಳಾದ ’ಎ’, ’ಒ’, ’ಳ’, ’ೞ’, ’ಱ’ಗಳು ಉಲಿಯ ಬರುವುದಿಲ್ಲ. ಹೀಗೆ ಬೇರೊಂದು ನುಡಿಯ ಉಲಿಗಳನ್ನು ಉಲಿಯುವಲ್ಲಿ ಆಗುವ ತಪ್ಪುಗಳನ್ನು ಕೊರತೆಯಂದು ಎಣಿಸಲೇ ಬಾರದು. ಏಕೆಂದರೆ ಆ ಆ ನುಡಿಗರು ತಮ್ಮ ತಮ್ಮ ನುಡಿಯ ಉಲಿಕೆಯ ಉಲಿಗಳನ್ನು ಚನ್ನಾಗೇ ಉಲಿಯಬಲ್ಲರು. ಇದೇ ತೆರ ಹೆಚ್ಚು ಕನ್ನಡಿಗರಿಗೂ ತಮ್ಮ ಕನ್ನಡದ್ದ ಉಲಿಕೆಯಲ್ಲಿರದ ಉಲಿಗಳನ್ನು ಉಲಿಯುವಲ್ಲಿ ತೊಡಕು ಮತ್ತು ಉಲಿಯಲಾರದೇ ಇರುವುದು ಕೊರತೆಯಲ್ಲ.
ಆದುದರಿಂದ ಕನ್ನಡದ್ದೇ ಉಲಿಗಳು ಯಾವುವು ಎಂದು ತಿಳಿಯುವುದು ನಮ್ಮ ಕಲಿಕೆಗೆ ಬೇಕೇ ಬೇಕಾದುದು. ಆ ಕುರಿತು ನಮ್ಮ ಸೊಲ್ಲರಿಮೆಗಾರರು(Grammarians) ಮತ್ತು ಕಲಿಸಿಗರು(Teachers) ಹೆಚ್ಚು ಆರಯ್ಯುಗಳನ್ನಾಗಲಿ, ಇಲ್ಲಿಯ ವರೆಗೂ ಒತ್ತನ್ನಾಗಲಿ ಕೊಟ್ಟ ಹಾಗೆ ಕಾಣುತ್ತಿಲ್ಲ. ಇದರಿಂದ ಕನ್ನಡದ ಮಕ್ಕಳಿಗೆ ಬೇರೆ ನುಡಿಯ ತಮ್ಮ ಉಲಿಗಳಲ್ಲಿಲ್ಲದ ಪದಗಳನ್ನು ಉಲಿಯುವಲ್ಲಾಗುವ ತಪ್ಪುಗಳಿಂದ ಕೀಳರಿಮೆಪಟ್ಟುಕೊಳ್ಳುತ್ತಾರೆ. ಈ ಕೀಳರಿಮೆಗೆ ನಮ್ಮ ಕಲಿಸಿಗರೇ ಅರಯಮಿಕೆ(ಅಜ್ಞಾನ)ವೂ ದೊಡ್ಡ ಸಲುವು(ಕಾರಣ). ನಮ್ಮ ಕಲಿಸಿಗರಿಗೆ ನಮ್ಮ ಕನ್ನಡದ್ದೇ ಉಲಿಕೆಯ ಅರಿವಿಲ್ಲದಿರುವುದು ಮತ್ತು ಕನ್ನಡದ ಸೊಲ್ಲರಿಮೆಗಳು(Grammars), ಕನ್ನಡ ಸೇರದ ದ್ರಾವಿಡನುಡಿಗುಂಪಿಗಿಂತ ಬೇರೆಯೇ ಆದ ಸಂಸ್ಕ್ರುತದ ಸೊಲ್ಲರಿಮೆಯಂತೆ ಇರುವುದು, ದೊಡ್ಡ ಕನ್ನಡದ ಉಲಿಯ ದಿಟತನವನ್ನು ಅರಿಯುವಲ್ಲಿ ಕುತ್ತೇ ಆಗಿದೆ.
ಈ ನೆಲದಲ್ಲಿ ಒಟ್ಟು ನೂರೆರಡು/೧೦೨ ಉಲಿಗಳಿವೆ. ಆದರೆ ಅವಶ್ಟೂ ಒಂದೇ ನುಡಿಯಲ್ಲಿಲ್ಲ.
ಕನ್ನಡದ್ದೇ ಆದ ಪದಗಳನ್ನು ಗಮನಿಸಿದಾಗ, ಇಲ್ಲವೇ ಈ ಕುರಿತು ಆರಯ್ಯುಗಳನ್ನು ನಡೆಸಿರುವ ಶಂಕರಬಟ್ಟರು ಮುಂತಾದವರ ಹೊತ್ತಗೆಗಳನ್ನು ಓದಿದರೆ ಸಲೀಸಾಗಿ ನಮಗೆ ಕನ್ನಡದ್ದೇ ಉಲಿಗಳು ಅರಿವಾಗುವುವು.
ಕನ್ನಡದಲ್ಲಿ ಅಯ್ದು ಅ, ಇ, ಉ, ಎ, ಒ ತೆರೆಯುಲಿ(vowel)ಗಳು ಮತ್ತು ಗಿಡ್ಡತೆರಯುಲಿ(short vowel)ಗಳಿಗೆ ಸಮವಾಗಿ ಅಯ್ದು ಆ, ಈ, ಊ, ಏ, ಓ ಉದ್ದತೆರೆಯುಲಿ(long vowel)ಗಳಿವೆ. ಇವನ್ನು ಬಿಟ್ಟು ಬಡಗ ಕನ್ನಡ ಮತ್ತು ಬೇರೆ ಕನ್ನಡದ ಕವಲುಗಳಲ್ಲಿ ಕೆಲವು ಬಗೆಯ ’ಅ’ ಮತ್ತು ’ಎ’ಗಳಿವೆ. ಆದರೆ ಹೆಚ್ಚು ಕನ್ನಡಿಗರು ಅದನ್ನು ಬಳಸುವುದಿಲ್ಲ. ಆದುದರಿಂದ ಅವನ್ನು ಎಣಿಸಿಲ್ಲ.
ಇನ್ನು ಮುಚ್ಚುಲಿಗಳು(consonents) ಕ, ಗ, ಙ, ಚ, ಜ, ಞ, ಟ, ಡ ಣ, ತ, ದ, ನ, ಪ, ಬ, ಮ , ಯ, ರ, ಲ, ವ, ಶ, ಸ, ಹ, ಳ, ೞ, ಱ ಒಟ್ಟು ೨೩.
ಒಟ್ಟು ಕನ್ನಡದ್ದೇ ಉಲಿಗಳು ಮುವ್ವತ್ತೆರಡು/ಮೂವತ್ತೆರಡು/೩೨
ಅ ಆ ಇ ಈ ಉ ಊ ಎ ಏ ಒ ಓ
ಕ ಗ ಙ
ಚ ಜ ಞ
ಟ ಡ ಣ
ತ ದ ನ
ಪ ಬ ಮ
ಯ, ರ, ಲ, ವ, ಶ, ಸ, ಹ, ಳ, ೞ, ಱ [ ೞ, ಱ ಹಳಗನ್ನಡದ ಉಲಿಗಳು. ಇನ್ನು ಕನ್ನಡದ ಕೆಲವು ಕವಲುಗಳಲ್ಲಿ ಬಳಕೆಯಲ್ಲಿವೆ ]
-ಮಾಯ್ಸ
ನೆರವು :
ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು – ಡಾ. ಡಿ.ಎನ್.ಶಂಕರ ಬಟ್ಟ
ಕನ್ನಡ ಬರಹವನ್ನು ಸರಿಪಡಿಸೋಣ – ಡಾ. ಡಿ.ಎನ್.ಶಂಕರಬಟ್ಟ
![180px-places_of_articulationsvg ಉಲಿಗಳು ಹುಟ್ಟುವ ತಾವುಗಳು[wikipedia]](http://tiligannada.files.wordpress.com/2009/03/180px-places_of_articulationsvg.png?w=600)
ಬರೆಯೋವಾಗ ಆದಶ್ಟು ಕನ್ನಡದಲ್ಲಿ ಬರೀಬೇಕು ಅಂದುಕೋತೀನಿ. ಅದು ಕನ್ನಡದ ಮೇಲಿನ ಒಲವು ಅನ್ನೋದಕ್ಕಿಂತ ಬೇರೊಂದು ಸಂಗತಿಯಿಂದಾಗಿ.![[barney.gonzaga.edu]](http://barney.gonzaga.edu/~aburton/img/dream_eye.jpg)

![ಜಂಗ್ಲಿ[nowrunning.com]](http://nowrunning.com/content/movie/2009/Junglee/stills/Junglee8.jpg)
